ನನ್ನ-ಅವಳು

ನನ್ನ-ಅವಳು ಸಿದ್ಧರಾಮ ಕೂಡ್ಲಿಗಿ ನನ್ನ ಅವಳು ನನ್ನೆದೆಯೊಳಗಿನ ಪುಟ್ಟ ಹಣತೆ ನೋವು, ನಿರಾಸೆ, ದು:ಖಗಳಾದಾಗಲೆಲ್ಲ ಪಟ್ಟನೆ ಬೆಳಗಿ ಕತ್ತಲೆಯ ದೂಡುವ ಒಳಬೆಳಕು – ನನ್ನ ಅವಳು ಸಾಗರದ ಅಲೆಗಳನ್ನೆಲ್ಲ ತನ್ನ ಹೆರಳೊಳಗೆ ಸುರುಳಿಯಾಗಿಸಿಕೊಂಡು ನನ್ನೆದೆಯ ತೀರಕೆ ಒಲವಿನ ಮುತ್ತಿಕ್ಕುವ ತಣ್ಣನೆಯ ಸಿಂಚನ – ನನ್ನ ಅವಳು ಪ್ರೇಮದ ಹಸಿರ ಮೇಲೆ ಒರಗಿ ಆಗಸವ ನೋಡಿದಾಗಲೆಲ್ಲ ಕಾಣಸಿಗುವ ಬೆಳ್ಮೋಡದ ಸುಂದರ ನಗೆ – ನನ್ನ ಅವಳು ದಣಿವಾದಾಗಲೆಲ್ಲ ಮೈಮನದ ತುಂಬ ಜುಳುಜುಳುನೆ ಹರಿದು ಪ್ರೀತಿಯ ಕಚಗುಳಿಯಿರಿಸಿ ನಕ್ಕುನಲಿಸುವ ಜೀವ-ನದಿ … Continue reading ನನ್ನ-ಅವಳು